ಬೆಂಗಳೂರು: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ (Karnataka 2nd PUC Result 2026) ಕೊನೆಗೂ ಪ್ರಕಟವಾಗಿದೆ. ಈಗಾಗಲೇ ಅಧಿಕೃತವಾಗಿ ಆನ್ಲೈನ್ ನಲ್ಲಿ ಫಲಿತಾಂಶ ಪ್ರಕಟವಾಗಿದ್ದು, ಸಂಜೆ 6 ಗಂಟೆ ನಂತರ ಶಿಕ್ಷಣ ಸಚಿವ ಮಧುಬಂಗಾರಪ್ಪ ಅವರು ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಈ ಬಾರಿ 7,10,363 ವಿದ್ಯಾರ್ಥಿಗಳ ಪೈಕಿ 6.10 ಲಕ್ಷ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ದ್ವಿತಿಯ PUC ಫಲಿತಾಂಶ ಪ್ರಕಟ:
ದ್ವಿತಿಯ ಪಿಯುಸಿ ಫಲಿತಾಂಶ ಆನ್ಲೈನ್ನಲ್ಲಿ https://karresults.nic.in ವೆಬ್ಸೈಟ್ ಮೂಲಕ ಫಲಿತಾಂಶವನ್ನು ಪರಿಶೀಲನೆ ಮಾಡಬಹುದು. ಅಲ್ಲದೇ ಡಿಜಿಲಾಕರ್ ಮೂಲಕವೂ ರಿಸ್ಟಲ್ ಚೆಕ್ ಮಾಡಬಹುದಾಗಿದೆ.
ನೀವು ದ್ವಿತೀಯ ಪಿಯುಸಿ ಫಲಿತಾಂಶಕ್ಕಾಗಿ ಅಧಿಕೃತ ವೆಬ್‌ಸೈಟ್ https://karresults.nic.in ಲಿಂಕ್ ಮೂಲಕ ರಿಸಲ್ಟ್ ವೀಕ್ಷಿಸಬಹುದಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕ ನಮೂದಿಸಿ, ‘Submit’ ಬಟನ್ ಒತ್ತಿದ ತಕ್ಷಣ ಅಂಕಪಟ್ಟಿ ನೋಡಬಹುದಾಗಿದೆ.
ಕರ್ನಾಟಕ ದ್ವಿತೀಯ ಪಿಯುಸಿ (2nd PUC) ಫಲಿತಾಂಶ 2026:
ಈ ಬಾರಿ ಸುಮಾರು 84% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 12ರಷ್ಟು ಹೆಚ್ಚಾಗಿದೆ. ಅಲ್ಲದೇ ಈ ವರ್ಷ ಪಾಸಿಂಗ್ ಮಾರ್ಕ್ಸ್ 33ಕ್ಕೆ ಇಳಿಸಲಾಗಿತ್ತು. ಸೈನ್ಸ್ ವಿಭಾಗದಲ್ಲಿ ಅತ್ಯಧಿಕ ಪಾಸ್ ಪ್ರಮಾಣ 90% ಕ್ಕಿಂತ ಹೆಚ್ಚಿದ್ದರೆ, ಕಾಮರ್ಸ್ ವಿಭಾಗದಲ್ಲಿ ಸರಾಸರಿ 80% ಪಾಸ್ ಪ್ರಮಾಣವಿದೆ. ಇನ್ನು, ಕಲಾ ವಿಭಾಗದಲ್ಲಿ 75% ಉತ್ತೀರ್ಣರಾಗಿದ್ದಾರೆ.
ಜಿಲ್ಲಾವಾರು ಸಾಧನೆ:
* ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮತ್ತೆ ಮುಂಚೂಣಿಯಲ್ಲಿ, ಅತ್ಯಧಿಕ ಪಾಸ್ ಪ್ರಮಾಣ ದಾಖಲಿಸಿದೆ.
* ಬೆಂಗಳೂರು ನಗರ ಮತ್ತು ಮೈಸೂರು ಜಿಲ್ಲೆಗಳೂ ಉತ್ತಮ ಸಾಧನೆ ತೋರಿವೆ.
ಟಾಪರ್ಸ್:
- ಸೈನ್ಸ್ ವಿಭಾಗದಲ್ಲಿ 598/600 ಅಂಕಗಳೊಂದಿಗೆ ವಿದ್ಯಾರ್ಥಿ ರಾಜ್ಯದ ಮೊದಲ ಸ್ಥಾನ ಪಡೆದಿದ್ದಾರೆ.
- ಕಾಮರ್ಸ್ ವಿಭಾಗದಲ್ಲಿ 595/600 ಅಂಕಗಳೊಂದಿಗೆ ಟಾಪರ್.
- ಆರ್ಟ್ಸ್ ವಿಭಾಗದಲ್ಲಿ 590/600 ಅಂಕಗಳೊಂದಿಗೆ ಮೊದಲ ಸ್ಥಾನ.
- ಯುವತಿಯರೇ ಮೇಲುಗೈ
- ಪುನರ್‌ಪರೀಕ್ಷೆ: ಅಸಮಾಧಾನಗೊಂಡ ವಿದ್ಯಾರ್ಥಿಗಳಿಗೆ ರೀವಾಲ್ಯುವೇಶನ್/ರೀಟೋಟಲಿಂಗ್ ಅರ್ಜಿ ಸಲ್ಲಿಸಲು ಅವಕಾಶ.
ಒಟ್ಟಿನಲ್ಲಿ, ಈ ಬಾರಿ ಫಲಿತಾಂಶದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಮುಂಚೂಣಿಯಲ್ಲಿ ಇದ್ದು, ರಾಜ್ಯದ ತೇರ್ಗಡೆ ಪ್ರಮಾಣವು ಕಳೆದ ವರ್ಷದಿಗಿಂತ ಹೆಚ್ಚಾಗಿದೆ.
