ರಾಣಿ ಅಬ್ಬಕ್ಕ ತುಳುವರ ಹೆಮ್ಮೆಯ ಪ್ರತೀಕ -ಡಾ.ತುಕಾರಾಮ ಪೂಜಾರಿ…

ಬಂಟ್ವಾಳ, ಜೂ.16: ರಾಣಿ ಅಬ್ಬಕ್ಕ ದೇವಿ ತುಳುವರ ಹೆಮ್ಮೆಯ ಪ್ರತೀಕವಾಗಿದ್ದು ವಿದೇಶಿ ದಾಸ್ಯದ ವಿರುದ್ಧ ಹೋರಾಡಿದ ವೀರ ಮಹಿಳೆ.ಪೋರ್ಚುಗೀಸರ ಅಟ್ಟಹಾಸಕ್ಕೆ ದಿಟ್ಟ ಉತ್ತರ ನೀಡಿದ ರಾಣಿ ಅಬ್ಬಕ್ಕ ಇತಿಹಾಸದ ಪುಟಗಳಲ್ಲಿ ಮೊದಲ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಗುರಿತಿಸಲ್ಪಟ್ಟಿದ್ದಾಳೆ ಎಂದು ರಾಣಿ ಅಬ್ಬಕ್ಕ ದೇವಿ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಹೇಳಿದರು.
ಅವರು ಬಂಟ್ವಾಳ ಜೈನ್ ಮಿಲನ್ ವತಿಯಿಂದ ಸಂಸ್ಕೃತಿ – ಸಂಸ್ಮರಣೆ ಎಂಬ ಧ್ಯೇಯದೊಂದಿಗೆ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಸಂಚಯಗಿರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ವೀರ್ ರಾಜೇಂದ್ರ ಜೈನ್ ಪೆರ್ಲ ಇವರುಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಡಾ. ಸುದೀಪ್ ಸಿದ್ಧಕಟ್ಟೆ ಭಾಗವಹಿಸಿದ್ದರು.

ಭಾರತೀಯ ಜೈನ್ ಮಿಲನ್ ವಲಯ 8 ಮಂಗಳೂರು ವಿಭಾಗ ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್ , ವೇಣೂರು ಜೈನ್ ಮಿಲನ್ ಪೂರ್ವಕಾರ್ಯದರ್ಶಿ ನಿರ್ಮಲ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬಂಟ್ವಾಳ ಅಧ್ಯಕ್ಷ ರಾಜೇಂದ್ರ ಜೈನ್ ಸ್ವಾಗತಿಸಿದರು. ಕಾರ್ಯದರ್ಶಿ ಜಯಕೀರ್ತಿ ಇಂದ್ರ ಪಾಣೆಮಂಗಳೂರು ವರದಿ ವಾಚಿಸಿದರು. ಹರ್ಷರಾಜ್ ಬಲ್ಲಾಳ್ ನಿರ್ವಹಣೆ ಮಾಡಿದರು. ಸಾಮೂಹಿಕ ಶಾಂತಿಮಂತ್ರ ಪಠಣದ ಬಳಿಕ ತುಳು ಅಧ್ಯಯನ ಕೇಂದ್ರವನ್ನು ವೀಕ್ಷಣೆ ಮಾಡಲಾಯಿತು.

Image

Related Articles